ವಿನಯ್ ಸಮಜಾಯಿಸಿ ಕೊಡಲು ಬಂದಾಗ ಸರಿಯಾದ ರೀತಿಯಲ್ಲಿಯೇ ಕಿಚ್ಚ ಬುದ್ಧಿ ಹೇಳಿದ್ದಾರೆ. ಬಳೆಗಳು ಬಲ ಹೀನತೆಯ ಸಂಕೇತವಲ್ಲ ಬಲದ ಸಂಕೇತ ಎಂದು ಹೇಳುವ ಮೂಲಕ ಹೆಣ್ಣು ಮಕ್ಕಳ ಆತ್ಮವಿಶ್ವಾಸವನ್ನ ಹೆಚ್ಚಿಸುವ ಕೆಲಸ ಮಾಡಿದ್ದಾರೆ.
ವಿನಯ್‌ಗೆ ಕಿಚ್ಚ ಸುದೀಪ್ ಸರಿಯಾಗಿ ತರಾಟೆ ತೆಗೆದುಕೊಂಡಿದ್ದಕ್ಕೆ ಪ್ರೇಕ್ಷಕರಂದು ಫುಲ್ ಫಿದಾ ಆಗಿದ್ದಾರೆ. ಈ ವಾರವು ಸಹ ಕಿಚ್ಚ ಸುದೀಪ್ ಏನಾದರೂ ವಿನಯ್ ಮೇಲೆ ಗರಂ ಆಗದೆ ಇದ್ದಿದ್ದರೆ ಇದೊಂದು ಸ್ಕ್ರಿಪ್ಟೆಡ್ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಆದರೆ ಯಾರೇ ತಪ್ಪು ಮಾಡಿರ ಅದಕ್ಕೆ ಕಿಚ್ಚನ ಪಂಚಾಯಿತಿಯಲ್ಲಿ ಶಿಕ್ಷೆ ಕಟ್ಟಿಟ್ಟ ಬುತ್ತಿ ಅನ್ನೋದು ಸಾಬೀತಾಗಿದೆ. ಇಡೀ ಕರ್ನಾಟಕದ ಜನತೆ ಕಿಚ್ಚನನ್ನು ಮೆಚ್ಚಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಕಿಚ್ಚನ ಮಾತುಗಳಿಗೆ ಹುಚ್ಚರಾಗಿದ್ದಾರೆ. ಸಂಗೀತ ಅಂತೂ ಕಿಚ್ಚ ಸುದೀಪ್ ಮಾತನಾಡುತ್ತಾ ಇದ್ದರೆ ಚಪ್ಪಾಳೆ ತಟ್ಟುವ ಮೂಲಕ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು ಕಿಚ್ಚ ಸುದೀಪ್ ಮತ್ತೊಂದು ಕೆಲಸವನ್ನು ಬಳೆ ಬಳೆ ಎಂದು ಅನ್ನುತ್ತಿದ್ದವರ ಕೈಯಲ್ಲಿ ಮಾಡಿಸಿದ್ದು ಪ್ರೇಕ್ಷಕರಂತು ಸಾಕಷ್ಟು ಖುಷಿಪಟ್ಟಿದ್ದಾರೆ.
ವಿನಯ್‌ಗೆ ಕಿಚ್ಚ ಸುದೀಪ್ ಬಳೆಗಳು ಬಲಹೀನತೆಯ ಸಂಕೇತವಲ್ಲ ಬಲದ ಸಂಕೇತ ಎಂದಿದ್ದು ಎಲ್ಲಾ ಹೆಣ್ಣು ಮಕ್ಕಳಿಗೆ ಖುಷಿ ತಂದಿದೆ. ಕೆಲವರು ತಮ್ಮ ಬಳೆಗಳಿರುವ ಕೈಗಳ ಫೋಟೊ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ನಟಿ ಕಾವ್ಯ ಶಾಸ್ತ್ರಿ ಫೋಟೊ ಹಾಕಿ “ನಾನು ಹೆಣ್ಣು. ಬಳೆ ಬಲದ ಸಂಕೇತ” ಎಂದು ಬರೆದುಕೊಂಡಿದ್ದಾರೆ. ಸುದೀಪ್ ಪತ್ನಿ ಪ್ರಿಯಾ “ಈ ಬಳೆಗೆ ನೀವು ಕೊಟ್ಟ ಚಪ್ಪಾಳೆಗೆ ನನ್ನ ಚಪ್ಪಾಳೆ ಕೂಡ ಇದೆ” ಎಂದು ಟ್ವೀಟ್ ಮಾಡಿದ್ದಾರೆ.
ಸುದೀಪ್ ಮಾತಿಗೆ ಚಪ್ಪಾಳೆ ತಟ್ಟಿದ ಪ್ರೇಕ್ಷಕರು
ಕಿಚ್ಚ ಸುದೀಪ್ ಶೋ ಶುರು ಮಾಡಿದ ಕೂಡಲೇ ಬಳೆಗಳ ಬಗ್ಗೆ ಮಾತನಾಡಿದರು. ವಾರಪೂರ್ತಿ ಬಳೆಗಳದ್ದೇ ಸೌಂಡ್ ಆಗಿದೆ ಎಂದು ವಿನಯ್ ಬಳಿ ಕೇಳಿದರು. ವಿನಯ್‌ರವರೇ ಬಳೆಗಳು ಹೆಣ್ಣು ಮಕ್ಕಳ ಧೈರ್ಯದ ಸಂಕೇತ, ಅವು ಬಲಹೀನತೆಯ ಸಂಕೇತವಲ್ಲ ಎಂದು ಹೇಳುವ ಮೂಲಕ ವೀಕ್ಷಕರಿಗೆ ಸಂತಸ ತಂದರು. ಇನ್ನೂ ಇದೇ ವೇಳೆ ಬಳೆ ಬಳೆ ಎನ್ನುತ್ತಿದ್ದ ವಿನಯ್ ಕೈನಲ್ಲೇ ಸಂಗೀತ ಕೈನಲ್ಲಿದ್ದ ಬಳೆಗಳ ಫೋಟೋ ಫ್ರೇಮ್ ಹೊರಗೆ ತೆಗೆಸಿ ಎಲ್ಲರಿಗೂ ತೋರಿಸುವಂತೆ ಹೇಳಿದರು.